Monday 11 July 2016

ಜುಲೈ 11: ಇಂದು ವಿಶ್ವ ಜನಸಂಖ್ಯಾ ದಿನ

 
ಜನರು ಎದುರಿಸುವ ಸಮಸ್ಯೆಗಳು ಮತ್ತು ಜನರಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಚಿಂತನೆ ನಡೆಸುವುದಕ್ಕಾಗಿ ವಿಶ್ವ ಜನಸಂಖ್ಯಾ ದಿನ ಆಚರಿಸಲಾಗುತ್ತಿದೆ. 1989ರ ಜುಲೈ 11ರಂದು ಮೊದಲ ಬಾರಿ ವಿಶ್ವ ಸಂಸ್ಥೆಯು ಜನಸಂಖ್ಯಾ ದಿನವನ್ನು ಆಚರಿಸಿತು.ಸದ್ಯ ಜಗತ್ತಿನ ಅತಿ ಹೆಚ್ಚು ಜನಸಂಖ್ಯೆಯ ದೇಶ ಚೀನಾ. ಆದರೆ ಒಂದು ದಶಕದೊಳಗೆ ಚೀನಾವನ್ನು ಹಿಂದಿಕ್ಕಿ ಭಾರತ ಮೊದಲ ಸ್ಥಾನ ಪಡೆಯಲಿದೆ ಎಂದು ಅಂದಾಜಿಸಲಾಗಿದೆ. ಹದಿಹರೆಯದ ಹೆಣ್ಣು ಮಕ್ಕಳು ತಮ್ಮ ಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಸಾಧ್ಯವಾಗುವಂತೆ ಭಾರತ ಹೆಚ್ಚಿನ ಗಮನ ಹರಿಸಬೇಕಿದೆ ಎಂದು ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ (ಯುಎನ್‌ಎಫ್‌ಪಿಎ) ಹೇಳಿದೆ.

ಹದಿಹರೆಯದ ಹುಡುಗಿಯರ ಅಭಿವೃದ್ಧಿಗೆ ಗಮನ ಹರಿಸಿ
ಇದು ಈ ವರ್ಷದ ಜನಸಂಖ್ಯಾದ ದಿನದ ಘೋಷಣೆ. ಹದಿಹರೆಯದ ಹೆಣ್ಣು ಮಕ್ಕಳು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವಂತೆ ಇಡೀ ಜಗತ್ತು ನೆರವಾಗಬೇಕು ಎಂಬುದು ಈ ಘೋಷಣೆ ಹಿಂದಿನ ಚಿಂತನೆ.
 

 


No comments:

Post a Comment