Monday 11 July 2016

ಎನ್‌ಐಎ ತಂಡದಿಂದ ತನಿಖೆ


 
ಕಾಸರಗೋಡು: ಕಾಸರಗೋಡು ಜಿಲ್ಲೆಯ 15 ಮಂದಿ ಐಎಸ್‌ ಉಗ್ರರ ಶಿಬಿರ ಸೇರಿಕೊಂಡಿದ್ದಾರೆ ಎಂಬ ಶಂಕೆಯಿಂದಾಗಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ‘ರಾ’ ಮತ್ತು ರಾಜ್ಯ ಪೊಲೀಸ್‌ ತಂಡ ಜಿಲ್ಲೆಯಲ್ಲಿ ತನಿಖೆ ಆರಂಭಿಸಿದೆ.
‘ರಾ’ದ ಕೊಚ್ಚಿ ವಿಭಾಗದ ಡಿವೈಎಸ್‌ಪಿ ವಿಕ್ರಂ, ಎನ್‌ಐಎ ಡಿವೈಎಸ್ಪಿ ಸತೀಶ್ ಬಾಬು ಸ್ಥಳ ಸಂದರ್ಶಿಸಿ, ಪ್ರಾಥಮಿಕ ತನಿಖೆ ನಡೆಸಿ ಮರಳಿದ್ದಾರೆ. ನಾಪತ್ತೆಯಾದವರ ಮನೆಗಳಿಗೂ ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ.ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಆದೇಶದ ಮೇರೆಗೆ ಉತ್ತರ ವಲಯದ ಎಡಿಜಿಪಿ ಸುದೇಶ್ ಕುಮಾರ್ ತನಿಖೆ ಆರಂಭಿಸಿದ್ದಾರೆ. ‘ನಾವು ಐಎಸ್ ಶಿಬಿರದಲ್ಲಿದ್ದೇವೆ, ಇನ್ನು ಊರಿಗೆ ಮರಳುವುದಿಲ್ಲ’ ಎಂದು ತ್ರಿಕರಿಪುರದ ಎಳಂಬಚ್ಚಿ ನಿವಾಸಿ ಫಿರೋಜ್ ಎಂಬವರು ತನ್ನ ಮನೆಯವರಿಗೆ ಇದೇ 5ರಂದು ಫೋನ್ ಮಾಡಿದ್ದಾರೆ ಎನ್ನಲಾಗಿದೆ.

ಅಫ್ಘಾನಿಸ್ತಾನದ ಗಡಿ ಪ್ರದೇಶದಿಂದ ಈ ಫೋನ್ ಕರೆ ಬಂದಿತ್ತು ಎನ್ನಲಾಗಿದೆ. ಕಾಸರಗೋಡು ಜಿಲ್ಲೆಯ ತ್ರಿಕರಿಪುರ ಮತ್ತು ಪಡನ್ನ ಪ್ರದೇಶಗಳಿಂದ ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳ ಸಹಿತ 15 ಮಂದಿ ಜೂನ್  ತಿಂಗಳಲ್ಲಿ ಸಿರಿಯಾ ಅಥವಾ ಅಫ್ಘಾನಿಸ್ತಾನದ ಐಎಸ್ ಶಿಬಿರಕ್ಕೆ ತೆರಳಿದ್ದಾರೆ ಎಂದು ಶಂಕಿಸಲಾಗಿದೆ.

ನಾಪತ್ತೆಯಾದ ಯುವತಿ ತಾಯಿಯಿಂದ ಕೇರಳ ಸಿ.ಎಂ ಭೇಟಿ
ತಿರುವನಂತಪುರ (ಪಿಟಿಐ): ಕೇರಳದಿಂದ ಗಲ್ಫ್‌ ರಾಷ್ಟ್ರಗಳಿಗೆಂದು ಹೋಗಿ ನಾಪತ್ತೆಯಾಗಿರುವ 17 ಮಂದಿಯಲ್ಲಿ ಒಬ್ಬರಾದ ನಿಮಿಷಾ ಎಂಬ ಯುವತಿಯ ತಾಯಿ ಬಿಂದು ಅವರು ಭಾನುವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರನ್ನು ಭೇಟಿಯಾಗಿ ಪ್ರಕರಣದ ತನಿಖೆ ನಡೆಸುವಂತೆ ಕೋರಿದರು.

ಈ 17 ಜನರು ಐಎಸ್‌ ಉಗ್ರಗಾಮಿ ಸಂಘಟನೆ ಸೇರಿದ್ದಾರೆ ಎಂದು ಶಂಕಿಸಲಾಗಿದೆ. ‘ಈ ವಿಚಾರದ ತನಿಖೆ ಪ್ರಗತಿಯಲ್ಲಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ’ ಎಂದು ಬಿಂದು ಅವರು ಹೇಳಿದ್ದಾರೆ. ಬೆಕ್ಸಿನ್‌ ಎಂಬ ಹೆಸರಿನ ಕ್ರೈಸ್ತ ಯುವಕನನ್ನು ನಿಮಿಷಾ ಅವರು ಮದುವೆಯಾಗಿದ್ದಾರೆ.  ಕಾಸರಗೋಡಿನ ಕಾಲೇಜಿನಲ್ಲಿ ನಿಮಿಷಾ ಅವರು ದಂತ ವೈದ್ಯ ಪದವಿ ಕೋರ್ಸ್‌ನ ಅಂತಿಮ ವರ್ಷದಲ್ಲಿದ್ದಾಗ ಇವರಿಬ್ಬರು ಭೇಟಿಯಾಗಿದ್ದರು. ಬೆಕ್ಸಿನ್‌ ಎಂಬಿಎ ಪದವೀಧರ ಎಂದು ಬಿಂದು ಅವರು ತಿಳಿಸಿದ್ದಾರೆ.

ನಂತರ ಈ ಇಬ್ಬರೂ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ‘ಮೇ 16ರಂದು ಗಂಡನ ಜತೆ ನಿಮಿಷಾ ಮನೆಗೆ ಬಂದಿದ್ದಳು. ನಂತರ ಮೇ 18ರಂದು ಕರೆ ಮಾಡಿ ಶ್ರೀಲಂಕಾಕ್ಕೆ ಹೋಗುವುದಾಗಿ ತಿಳಿಸಿದ್ದಳು. ಆಕೆಯನ್ನು ತಡೆಯುವ ಪ್ರಯತ್ನ ಮಾಡಿದರೂ, ತಡೆಯುವುದು ಸಾಧ್ಯವಾಗಲಿಲ್ಲ’ ಎಂದು ಬಿಂದು ಅವರು ಹೇಳಿದ್ದಾರೆ.

ಐದು ಕುಟುಂಬಗಳಿಂದ ದೂರು: ಯುವಕ ಯುವತಿಯವರು ನಾಪತ್ತೆಯಾಗಿರುವ ಕಾಸರಗೋಡಿನ ಐದು ಕುಟುಂಬಗಳ ಸದಸ್ಯರು ಭಾನುವಾರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ



No comments:

Post a Comment