ನವದೆಹಲಿ: ಹವಾಮಾನದಲ್ಲಿನ ವೈಪರೀತ್ಯದಿಂದಾಗಿ 2030ರ ವೇಳೆಗೆ ಎರಡು ಲಕ್ಷಕ್ಕೂ ಅಧಿಕ ಜನ ಪ್ರತಿವರ್ಷ ಸಾವನ್ನಪ್ಪಲಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜು ಮಾಡಿದೆ.ಈ ಅವಧಿಯಲ್ಲಿ ಇಷ್ಟೊಂದು ಮಂದಿ ಸಾವನ್ನಪ್ಪಲು ಮೂಲ ಕಾರಣ ಅಪೌಷ್ಟಿಕತೆ, ಮಲೇರಿಯಾ, ಅತಿಸಾರ ಹಾಗೂ ಅತಿಯಾದ ಸೂರ್ಯನ ಶಾಖವೇ ಕಾರಣ. ಮುಂಬರುವ ವರ್ಷಗಳಲ್ಲಿ ವಿಶ್ವದದಲ್ಲಿನ ವಾತಾವರಣ ಸಂಪೂರ್ಣ ಬದಲಾವಣೆ ಕಾಣಲಿದೆ. ಇದರಿಂದಾಗಿ ಸರಿಸುಮಾರು 2.50 ಲಕ್ಷ ಜನರು
2030ರ ವೇಳೆಗೆ ಪ್ರತಿವರ್ಷ ಸಾವನ್ನಪ್ಪಲಿದ್ದು, ಸಾಂಕ್ರಾಮಿಕ ರೋಗಗಳು ಅಧಿಕವಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ಈ ಹವಾಮಾನ ವೈಪರೀತ್ಯದಿಂದ ಸಾವನ್ನಪ್ಪುವವರು ಹೆಚ್ಚಾಗಿ, ಇದರಲ್ಲಿ ಮಹಿಳೆಯರು, ಮಕ್ಕಳು, ಯುವಕರು ಹಾಗೂ ವೃದ್ಧರು ಸೇರಿರುತ್ತಾರೆ ಎಂದು ಹೇಳಲಾಗಿದೆ.
No comments:
Post a Comment