ನವದೆಹಲಿ: ಆರ್ಥಿಕ ಸಂಕಷ್ಟದಿಂದ ಎಂಟು ವರ್ಷದ ಹಿಂದೆ ಸ್ಥಗಿತಗೊಂಡಿದ್ದ ನ್ಯಾಷನಲ್ ಹೆರಾಲ್ಡ್ ಹಾಗೂ ಮತ್ತೆರಡು ಪತ್ರಿಕೆಗಳನ್ನು ಮರು ಪ್ರಕಾಶನಗೊಳಿಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಪತ್ರಿಕೆಗಳನ್ನು ರೀಲಾಂಚ್ ಮಾಡುವ ಪ್ರಕಟಣೆಯನ್ನು ಈ ವಾರ ಘೊಷಿಸಲಿದೆ. ಪಬ್ಲಿಕೇಷನ್ಸ್ನಬೋರ್ಡ್ ಆಫ್ ಡೈರೆಕ್ಟರ್ಗಳು ಈ ವಾರ ಸಭೆ ಸೇರಿ ಪತ್ರಿಕೆಯ ಹೊಸ ಸಂಪಾದಕರ ಹೆಸರನ್ನು ಸೂಚಿಸಲಿದ್ದಾರೆ ಎಂದು ಕಾಂಗ್ರೆಸ್ನ ಖಜಾಂಚಿ ಮೋತಿಲಾಲ್ ವೋರಾ ತಿಳಿಸಿದ್ದಾರೆ. 1938ರಲ್ಲಿ ಲಖನೌದಲ್ಲಿ
ಜವಾಹರ್ಲಾಲ್ ನೆಹರು ನ್ಯಾಷನಲ್ ಹೆರಾಲ್ಡ್ ಹೆಸರಿನ ಆಂಗ್ಲ ಪತ್ರಿಕೆಯನ್ನು ಆರಂಭಿಸಿದ್ದರು. ಕ್ವಿಟ್ ಇಂಡಿಯಾ ಚಳವಳಿ ವೇಳೆ ಬ್ರಿಟಿಷರು ಪತ್ರಿಕೆ ಮೇಲೆ ನಿಷೇಧ ಹೇರಿದ್ದರು. ಇದರಿಂದ 1940ರಿಂದ 1972ರ ತನಕ ಪ್ರಸಾರವನ್ನು ಸ್ಥಗಿತಗೊಳಿಸಿತ್ತು. ಮತ್ತೆ ಪತ್ರಿಕೆ ಆರಂಭಗೊಂಡರೂ, 2008ರಲ್ಲಿ ಪೂರ್ತಿ ಮುಚ್ಚಿಹೋಗಿತ್ತು. ಆದರೆ ಪತ್ರಿಕೆ ನಡೆಸುತ್ತಿದ್ದ ಅಸೋಸಿಯೇಟೆಡ್ ಜರ್ನಲ್ ಸಂಸ್ಥೆ ಹೆಸರಲ್ಲಿ ದೆಹಲಿ, ಮುಂಬೈನಲ್ಲಿ ಆಸ್ತಿ ಹೊಂದಿತ್ತು. ಯಂಗ್ ಇಂಡಿಯನ್ ಸಂಸ್ಥೆಯನ್ನು ಸೋನಿಯಾ ಗಾಂಧಿ ಖರೀದಿಮಾಡುವ ಮೂಲಕ ಅಕ್ರಮವೆಸಗಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಸುಬ್ರಮಣಿ ಯನ್ ಸ್ವಾಮಿ ಕೋರ್ಟ್ನಲ್ಲಿ ದೂರು ಸಲ್ಲಿಸಿದ್ದರು.Monday, 11 July 2016
Subscribe to:
Post Comments (Atom)
No comments:
Post a Comment