Monday, 11 July 2016

ಮಂಗಳನ ಮೇಲಿದೆ ಘನೀಕೃತ ಕಾರ್ಬನ್



 ವಾಷಿಂಗ್ಟನ್: ಮಂಗಳನ ಮೇಲೆ ಕಾರ್ಬನ್ ಡೈಆಕ್ಸೈಡ್ ಘನೀಕೃತ ರೂಪದಲ್ಲಿರುವುದನ್ನು ನಾಸಾದ ನೌಕೆ ಕಂಡುಹಿಡಿದಿದೆ. ಕೆಂಪು ಗ್ರಹದ ಧೂಳಿನ ಭಾಗಗಳಲ್ಲಿ ಚಳಿಗಾಲದ ರಾತ್ರಿಗಳಲ್ಲಿ ಈ ಕಾರ್ಬನ್ ಡೈ ಆಕ್ಸೈಡ್ ತೆಳುವಾದ ಹಿಮದ ಪದರವಾಗಿ ರೂಪುಗೊಳ್ಳುತ್ತದೆ. ಬೆಳಗಾಗುವ ಹೊತ್ತಿಗೆ ಇವು ಆವಿಯಾಗುತ್ತದೆ. ಈ ಪ್ರದೇಶದಲ್ಲಿ ನಿತ್ಯದ ತಾಪಮಾನ ಭಾರಿ ಪ್ರಮಾಣದಲ್ಲಿ ಏರಿಳಿತವಾಗುತ್ತದೆ. ಅಲ್ಲದೆ ಉಷ್ಣತೆ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಈ ಭಾಗದಲ್ಲಿ ಕಡಿಮೆಯಿರುತ್ತದೆ. ಮಂಗಳನ ಥಾರ್ಸಿಸ್,
ಅರೇಬಿಯಾ ಪ್ರದೇಶದಲ್ಲಿ ಇದನ್ನು ಗುರುತಿಸಲಾಗಿದ್ದು, ಈ ಪ್ರದೇಶಗಳು ಅಮೆರಿಕದ ಟೆಕ್ಸಾಸ್ ನಗರಕ್ಕಿಂತ ದೊಡ್ಡದಾಗಿವೆ.



No comments:

Post a Comment