Monday, 11 July 2016

ಖಾದಿ ಸಮವಸ್ತ್ರ ಎನ್ ಟಿಪಿಸಿ ಬೇಡಿಕೆ


ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮ (ಎನ್ಟಿಪಿಸಿ) ಖಾದಿ ಮತ್ತು ಗ್ರಾಮೋದ್ಯೋಗ ಕೈಗಾರಿಕೆಗೆ ₹5.34 ಕೋಟಿ ಮೊತ್ತದ ಸಮವಸ್ತ್ರಗಳಿಗೆ ಬೇಡಿಕೆ ಸಲ್ಲಿಸಿದೆ.ತನ್ನ ಉದ್ಯೋಗಿಗಳಿಗೆ 23 ಸಾವಿರ ಖಾದಿಯ ಜಾಕೆಟ್ ಸಿದ್ಧಪಡಿಸುವಂತೆ ಎನ್ಟಿಪಿಸಿ ಬೇಡಿಕೆ ಸಲ್ಲಿಸಿದೆ ಎಂದು ಖಾದಿ ಮತ್ತು ಗ್ರಾಮೋದ್ಯೋಗ ಕೈಗಾರಿಕೆ ಆಯೋಗ ಅಧ್ಯಕ್ಷ ಕೆ.ವಿ. ಸಕ್ಸೆನಾ ತಿಳಿಸಿದ್ದಾರೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಯಿಂದ ಇತ್ತೀಚಿಗೆ ಇಷ್ಟು ಮೊತ್ತದ ಬೇಡಿಕೆ ಬಂದಿರುವುದು ಇದೇ ಮೊದಲು.

2 comments: