ನವದೆಹಲಿ: ಭೂಮಿ ಒಡೆತನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ಮಸೂದೆಯನ್ನು ಸಿದ್ಧಪಡಿಸಿದೆ.ಹೊಸ ಕಾಯ್ದೆಯು, 2011ರಲ್ಲಿ ಯುಪಿಎ ಸರ್ಕಾರ ಭೂಮಿ ಒಡೆತನಕ್ಕೆ ಸಂಬಂಧಿಸಿದಂತೆ ತಂದಿರುವ ಕಾಯ್ದೆಯ ಸುಧಾರಿತ ಆವೃತ್ತಿ ಆಗಿರಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಮೂಲಗಳು ತಿಳಿಸಿದೆ.ಮಸೂದೆಯನ್ನು ಕಾನೂನು ಇಲಾಖೆಯ ಪರಿಶೀಲನೆಗೆ ಕಳುಹಿಸಿ, ಅಲ್ಲಿಂದ ಬಂದ ನಂತರ 18ರಂದು ಆರಂಭವಾಗಲಿರುವ ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ಮಂಡಿಸುವ ಬಗ್ಗೆ
ನಿರ್ಧರಿಸಲಾಗುತ್ತದೆ ಎಂದು ಈ ಮೂಲಗಳು ಹೇಳಿವೆ. ಭೂ ಮಾಲೀಕರಿಗೆ ಈಗ ಬರೀ ಕ್ರಯಪತ್ರ ನೀಡಲಾಗುತ್ತದೆ.
ಹೊಸ ಮಸೂದೆಯಲ್ಲಿ ಭೂ ಒಡೆತನದ ಸಂಪೂರ್ಣ ವಿವರಗಳನ್ನು ಒಳಗೊಂಡ ದಾಖಲೆಗಳನ್ನು ಭೂ ಮಾಲೀಕರಿಗೆ ನೀಡುವುದಕ್ಕೆ ಅವಕಾಶವಿರುತ್ತದೆ. ಕ್ಲಿಷ್ಟಕರ ನಿಯಮಾವಳಿಗಳಿಗೆ ವಿದಾಯ ಹೇಳಿ ಭೂ ಹಕ್ಕು, ದಾಖಲೆ ಮತ್ತು ವ್ಯಾಜ್ಯ ಪರಿಹಾರಕ್ಕೆ ಸರಳ ನಿಯಮಗಳನ್ನು ಅಳವಡಿಸಲಾಗಿದೆ.
ಡಿಜಿಟಲ್ ಭೂ ದಾಖಲೆ, ಸರ್ವೆ ನಕ್ಷೆ ಮತ್ತು ನೋಂದಣಿ ಪ್ರಕ್ರಿಯೆಗಳನ್ನು ಕಾಲಮಿತಿಯಲ್ಲಿ ಪೂರ್ತಿಗೊಳಿಸುವುದಕ್ಕೆ ಹೊಸ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಎನ್‌ಡಿಎ ಸರ್ಕಾರದ ಅವಧಿ ಪೂರ್ಣಗೊಳ್ಳುವ 2019ರೊಳಗೆ ಭೂದಾಖಲೆಗಳ ಡಿಜಿಟಲೀಕರಣ ಪೂರ್ತಿಗೊಳಿಸಲು ಗ್ರಾಮೀಣಾಭಿವೃದ್ಧಿ ಸಚಿವಾಲಯ 130 ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡಿದೆ.
ಮೊದಲ ಹಂತದ ಒಂದು ವರ್ಷದ ಅವಧಿಯಲ್ಲಿ 30 ಜಿಲ್ಲೆಗಳಲ್ಲಿ ಈ ಕಾರ್ಯ ಪೂರ್ತಿಗೊಳಿಸಲಾಗುತ್ತದೆ.
ಭೂ ದಾಖಲೆ ರಾಜ್ಯದ ವಿಷಯ ವಾದರೂ ಕೇಂದ್ರದ ಕಾನೂನು ಮಾದರಿ ಕಾನೂನಾಗಿ ಕಾರ್ಯ ನಿರ್ವಹಿಸುತ್ತದೆ
No comments:
Post a Comment